Saturday, December 13, 2014

ಆಕರ್ಷಣೆ

From many days was thinking to write a story. Here it goes. Hope you like it. 

Please forgive me for the typos!

    ನನ್ನೆಸರು ದಿಗಂತ್. ನನ್ನ ಬಗ್ಗೆ ಹೆಳ್ಬೇಕಂದ್ರೆ "ನಾನು ಸಿಂಪಲ್[Simple] ಅಂಡ್ ಸ್ಟ್ಯಲಿಶ್[Stylish] ಹುಡುಗ". ಸಿಂಪಲ್ ಅಂಡ್ ಸ್ಟ್ಯಲಿಶ್ ಹೇಗೆ  ಅಂತ ಯೊಚನೆ ಮಾಡ್ತ ಇದೀರ ? ನಾನು ನೊಡೊಕೆ ಸ್ಟ್ಯಲಿಶ್ ಆದರೆ ನನ್ನ ಮನ್ನಸ್ಸು ತುಂಬ ಸಿಂಪಲ್ . ಇನ್ನು ನನ್ನ ಕೆಲಸದ ಬ್ಬಗ್ಗೆ ಹೆಳ್ಬೆಕಂದ್ರೆ ಲಕ್ಷಾಂತರ ಇಂಜಿನೀರ್ಗಳಲ್ಲಿ[Engineer] ನಾನು ಒಬ್ಬ. ಲೈಫ್[Life] ಅಂದ್ರೆ ಬರೀ ಕೆಲಸ ಅಥವ ಸಾಧನೆ ಮಾಡೊದು ಅನ್ನೊ philosophy ನ್ನಂದಲ್ಲ. ಇರೊ ಕೆಲಸಾನ ಸರಿಯಾಗಿ ಮಡ್ತಾ ಲೈಫ್ ಒಳ್ಳೆ ರೀತಿನಲ್ಲಿ Enjoy ಮಾಡ್ಬೇಕು. ನ್ನನ್ hobbies Sports/ Movies/ Long drive/ Music.

    ಇನ್ನು ಲವ್ ಲೈಫ್ ಬಗ್ಗೆ ಹೇಳ್ಬೇಕು ಅಂದ್ರೆ. ಅದೊಂದು ದೊಡ್ಡ ಕಥೆ ಏನಲ್ಲ. ನನ್ ಲವ್ ಸ್ಟೋರೀಗೆ ಆಕರ್ಷಣೆ ಅಂತ ಹೆಸರಿಟ್ಟಿದ್ದೀನಿ. ಯಾಕೆ ಅಂತ ಆಮೇಲೆ ಹೇಳ್ತೀನಿ. ಇದೋ ಇಲ್ಲಿಂದ ಪ್ರಾರಂಭ. ಅವಳ ಮೇಲಿನ ನನ್ನ ಆಕರ್ಷಣೆ. ಆವತ್ತು ನಮ್ ಆಫೀಸ್ನಲ್ಲಿ ಎತ್ನಿಕ್ ಡೇ. ನಂದೊಂದು ಹುಡುಗರ ಗ್ರೂಪ್ ಇತ್ತು. ನಾವೆಲ್ಲ ಹಳ್ಳಿ ಸ್ತ್ಯ್ಲೆನಲ್ಲಿ ಬರೋಣ ಅಂತ ಅನ್ಕೊಂಡು ವೈಟ್ ಅಂಡ್ ವೈಟ್ ಶರ್ಟ್ ಅಂಡ್ ಪಂಚೇನಲ್ಲಿ ಬಂದಿದ್ವೀ. ಆ ದಿನ ಕೆಲಸ ಮಾಡೋ ಮೂಡಲ್ಲಿ ಯಾರು ಇರ್ಲಿಲ್ಲ. ಫೋಟೋ ಸೆಶನ್ಸ್ ಮತ್ತು ಹರಟೆನೇ ನಡೀತ್ತಿತ್ತು. ಎಲ್ಲಾರು ಕಾಣ್ಟೀಂಗೆ[Canteen] ಹೋಗೋಣ ಅಂತ ಡಿಸೈಡ್ ಮಡ್ವಿ. ಹೊರ್ಟ್ವಿ. ಆರ್ಡರ್ ಮಾಡಿ ಕುತ್ವಿ. ಕಾಣ್ಟೀನ್‌ನಲ್ಲಿ ಒಂದು ಗ್ರೂಪ್ ಫೋಟೋ ತೊಗೊಲೋಣ ಅಂತ ನನ್ ಫ್ರೆಂಡ್ ಹೇಳ್ದ. ಕ್ಯಾಂಟೀನೀನ ಮೂಲೆಯಲ್ಲಿ ಒಂದು ಗ್ರೂಪ್ ಇತ್ತು. ನನ್ ಫ್ರೆಂಡ್ ಅವ್ರಲ್ಲಿ ಫೋಟೋ ತಗಿಲಿಕ್ಕೆ ರಿಕ್ವೆಸ್ಟ್ ಮಾಡ್ತೀನಿ ಅಂತ ಹೊರ್ಟ. 

Painted by Swathi Medavaram

    ಆ ಗ್ರೌಪ್‌ನಿಂದ ಒಂದು ಹುಡುಗಿ ಫೋಟೋ ತಗೀಲಿಕ್ಕೆ ಒಪ್ಪಿಕೊಂಡು ಎದ್ದು ಬರ್ತಾಳೆ. ಈ ಹುಡುಗಿನೆ ನಾನು ಇಸ್ಟಾಪಡೋದು ಅಂತ ಅನ್ಕೋತಿದ್ರೆ ನಿಮ್ ಲಾಜಿಕ್ ತಪ್ಪು. ಇವಳು ಅವಳಲ್ಲ. ಅವಳು ಕ್ಯಾಮರ ತೊಗೊಂಡು ಸ್ಮೈಲ್ ಅಂದ್ಲು. ನಾವೆಲ್ಲ ಪಂಚೆಯ ತುದಿಯನ್ನ ಕೈಯಲ್ಲಿ ಇಡಿದು ಹೀರೊ ರೇಂಜ್ಗೆ ಸ್ಮೈಲ್ ಮಾಡ್ತ ಇದ್ವಿ. ಕಣ್ಣಿಗೆ ಬೆಳಕು ಹೋಡೀತು. ಆದರೆ ಅದು ಕ್ಯಾಮರ ಫ್ಲ್ಯಾಶ್ ಅಲ್ಲ. ಅದು ನಮ್ ಮುಂದೆ ನಡ್ಕೊಂಡ್ ಹೋದ ಯುವತಿ ಧರಿಸಿದ್ದ ಸೀರೆಯಲ್ಲಿನ mirrorgaLa reflection. ಅದರೆಡೆ ನೋಡಿದಾಗ ನನಗೆ ಕಾಣಿಸಿದ್ದು ಮಂದಾರ ಮುಗಳ್ನಗೆಯ ಮೋಹಕ ಚೆಲುವೆ. Dialogue heavy  ಅನ್ಸ್ಥಿದ್ಯಾ ? ಇಲ್ಲ ಕಣ್ರೀ ನಿಜವಾಗ್ಲೂ ಅಸ್ಟು prettyಯಾಗಿ ಕಣಿಸ್ತಿದ್ಲು. lifenalli ನನ್ನ ನಾನು ಮರೆತು ಈ rangenalli ಯಾರನ್ನೂ ನೋಡಿರ್ಲಿಲ್ಲ. I swear. ನಾನು ಅವಳನ್ನ ಮುಂಚೆ ತುಂಭಾ ಸಾರಿ ನೋಡಿದ್ದೀನಿ. ಆದರೆ ಇವತ್ತಿಗೂ ಆವತ್ತಿಗೂ ತುಂಭಾ ವ್ಯತ್ಯಾಸ ಇತ್ತು. ತುಂಭಾ ನೋಡ್ರೆ ನನ್ ಪಕ್ದಲ್ಲಿರವ್ರ್ಗೆ ಗೋತಾಗೊಗುತ್ತೆ ಅಂತ ಅವಳ ಕಡೆ ನೋಡೋದನ್ನ control ಮಾಡ್ದೆ. ನೋಡಿದ್ದೆಲ್ಲಾ ಬೇಕೇ ಬೇಕು ಅಂತ ಅನ್ಕೊಂಡ್ರೆ ಜೀವನ ಮುಂದೆ ಹೋಗಲ್ಲ. ನೋಟ್ ದಿಸ್ ಡೈಲಾಗ್. ಇದು ಲವ್ ಅಲ್ಲ ಜಸ್ಟ್ attraction. ದಿನಗಳು ಹಾಗೆ ಕಳೀತಿತ್ತು. ಅವಳನ್ನ ನೋಡ್ದಾಗ್ಲೆಲ್ಲ ಮನಸ್ಸಿಗೆ ಒಂತರಾ ಕುಶಿ ಆಗ್ತಿತ್ತು.  

    ಇದರ ಮದ್ಯೆ ಅವಳ ಹೆಸರು ಕೂಡ ಗೊತಾಯ್ತು. ಅವಳ ಹೆಸರು ಸಾಹಿತ್ಯ. ಹಾಗೆ ಅವಳ facebook profilegu ಒಂದು visit ಹಾಕ್ದೆ. ಆದರೆ ನನ್ನ ದುರದ್ರುಸ್ಟಕ್ಕೆ details ಫೋಟೋಸ್ ಪಬ್ಲಿಕ್ ಇರ್ಲಿಲ್ಲ.  ಫ್ರೆಂಡ್ request ಕಳ್ಸೋ ದೈರ್ಯ ನಾನ್ ಮಾಡ್ಲಿಲ್ಲ. canteen, pantry, ಆಫೀಸ್ eventsnalli ಕಾಣಸ್ತಿದ್ಳು. ಮತ್ತೆ ಇನೊಂದ್ ವಿಷ್ಯ ಅವಳು ನಮ್ ಫ್ಲೂರ್ನಲ್ಲೇ [floor] ಕೆಲಸ ಮಾಡ್ತಿದ್ದು. ಆದರೆ ನಾನ್ ಯಾವತ್ತೂ ಅವಳನ್ನ follow ಮಾಡಿ ನೋಡೋದು ಆತರ ಎಲ್ಲ ಮಾಡಿಲ್ಲ. I just like her. Nothing else. lovegu likegu ತುಂಭ ವ್ಯತ್ಯಾಸ ಇದೆ. I hope you know it. 


     ಸ್ವಲ್ಪ ದಿನಗಳ ಹಿಂದೆಯಿoದ ಒಳ್ಳೆ ಕೆಲಸ plus ಒಳ್ಳೆ package ಇರೋ ಕೆಲಸ ಹುಡುಕ್ತಿದ್ದೆ. ಅಂತದೊಂದು offer ಸಿಕ್ತು. Actually it was a superb offer. Sakath package. ನಾನು job resign ಮಾಡಿ notice periodnallidde. ಈ ವಿಷಯ ಮನೆಯಲ್ಲಿ ಹೇಳಿದ ತಕ್ಷಣ ಎಲ್ಲಾರ್ ಬಾಯಲ್ಲೂ ಒಂದೇ ಮಾತು: "ಇನ್ನೇನು ಒಳ್ಳೆ ಕೆಲಸ ಒಳ್ಳೆ ಪ್ಯಾಕೇಜ್ ಲೈಫ್ ಫುಲ್ settle. ಬೇಗ ಮದ್ವೆ ಮಾಡ್ಕೋ. ". ನಿನಗೆ ಯಾರಾದ್ರೂ ಇಸ್ಟ ಆಗಿದ್ರೆ ಹೇಳು ನಮಗೇನು problem ಇಲ್ಲ ಅಂತಾನೂ ಹೆಳ್ದ್ರು. ಎಲ್ಲಿ ಹೋದ್ರು ಬರೀ ಮದುವೆ ಮಾತೆ ನಡೀತಿತ್ತು. ನಾನ್ ಯಾವತ್ತೂ ನನ್ ಮದುವೆ ಬಗ್ಗೆ ಯೋಚನೆ ಮಾಡಿದ್ದೆ ಇಲ್ಲ. ಮನೆಯವರೆಲ್ಲ force ಮಾಡಿದಾಗ ಎಲ್ಲೋ ಒಂದು ಕಡೆ ಅವಳಿಗೆ ನನ್ನ ಇಸ್ಟದ ಬಗ್ಗೆ ತಿಳಿಸೊಣ ಅನ್ಸ್ತು. In reality ನಾವು ಎಸ್ಟೆ bold ಆಗಿ ಇದ್ರು ಕೆಲವು ವಿಷಯಗಳಲ್ಲಿ ಅದೇ boldness ಇರೋದಿಲ್ಲ. ನನಗೆ ಹೇಳೋ ದೈರ್ಯ ಬರ್ಲೇ ಇಲ್ಲ.

 

    ಆವತ್ತು ನನ್ನ last working day. ಅದ್ಯಾಕೋ ಮನಸು ತುಂಬಾ ಗೊಂದಲದಲ್ಲಿ ಸಿಕ್ಕಾಕೊಂಡಿತ್ತು. ನನಗೆ ನಾನೇ ಹೇಳ್ಕೊಂಡೆ "ಈ ವಿಷಯ ಅವಳತ್ರ ಹೇಳೋದು ತಪ್ಪಲ್ಲ, ಆದರೆ ಹೇಳ್ದೆ ಇದ್ರೆ ಹೇಳಿಲ್ವಲ್ಲ ಅನ್ನೋ feeling. Better ಹೇಳೆಬಿಡೋಣ ಅನ್ಸ್ತು. ಒಪ್ಕೊಂಡ್ರೆ ಕುಶಿ ಇಲ್ಲ ಅಂದ್ರೆ thats okay. ಈ ವಿಷಯದಲ್ಲಿ force ಮಾಡೋದ್ರಿಂದ ಪ್ರಯೋಜನ ಇಲ್ಲ. Plus ಇವತ್ತು ನನ್ನ last working day. ಅವಳು ಒಪ್ಪಿಲ್ಲ ಅಂದ್ರೆ ಮತ್ತೆ ಅವಳನ್ನ ನೋಡಿ uncomfortable feel ಆಗೋ situation ಬರೋದಿಲ್ಲ. finally ದೈರ್ಯ ಮಾಡ್ದೆ.



ಹೇಗೆ ಹೇಳೋದು ಅಂತ ಯೋಚನೆ ಮಾಡ್ದೆ. Facebookನಲ್ಲಿ message ಮಾಡ್ಲಾ ಅಥವ ಆಫೀಸ್ mail ಅಥವ communicator[ ಆಫೀಸ್ ಚಾಟ್ ಬಾಕ್ಸ್]. Official mail IDಗೆ mail ಮಾಡೋಣ ಅಂತ ಡಿಸೈಡ್ ಮಾಡ್ದೆ. ಹೇಗೆ ಹೇಳಲಿ ಏನು type ಮಾಡ್ಲಿ. ಕೊನೆಗೆ ಈ ಕೆಳಕಂಡಂತೆ ಬರೆದೆ.

Hi,
I don’t know how to say. I just like you. Let me know your opinion.
Regards,
Diganth
Mail ಕಳಿಸಿದೆ. mail ಕಳಿಸಿ ಆದಮೇಲೆ ಯಾಕೋ ತುಂಭಾ formal ಅಂಡ್ simple ಅನ್ಸ್ತು. ಈಗ ಅನ್ಕೊಂಡು ಏನು ಪ್ರಯೊಜ಼ನ. train ಹೋದ್ಮೇಲೆ ticket ತೊಗೊಳೋ ಹಾಗೆ ಅನ್ಕೊನ್ಡು ಸುಮ್ನಾದೆ. mailbox refresh ಮಾಡ್ತ ಕೂತಿದ್ದೆ.



friends ಎಲ್ಲಾ ಯಾಕೆ ಅಸ್ಟೊಂದು ಬೇಜಾರ್ ಮಾಡ್ಕೊಂಡಿದೀಯ ಅಂತ ಕೇಳ್ತಿದ್ರು. Last day ಅಂತ ಇಸ್ಟೊಂದು emotional ಆಗ್ಬೇಡ ಅಂತೆಲ್ಲ ಅಂತಿದ್ರು. ಆದರೆ ನನ್ನ ಬೇಜಾರಿಗೆ ನಿಜವಾದ ಕಾರಣ ಅವಳಿಂದ ಬಂದಂತ negative response. ಯಾವಾಗ್ಲೂ ನನ್ friends ನನ್ನ ಹೀರೊ, handsome dude ಅಂತ ಹೇಳ್ತ ನಿಂಗೇನಪ್ಪ ಹುಡ್ಗೀರು line ಅಲ್ಲಿ ನಿಲ್ತಾರೆ ಅಂತೆಲ್ಲ ರೇಗಿಸ್ತಿದ್ರು. ಅದನ್ನ ನೆನೆಸಿಕೊಂಡು ಒಂದೆಡೆ ವ್ಯಂಗ್ಯದ ನಗು ಮಾತೊಂದೆಡೆ ದುಃಖ ಆಗ್ತಿತ್ತು. ಮರಳಿ ಬಾರದಿರಲಿ ಮರೆಯಲಾಗದ ನೋವು ಮರೆಯಾಗುವ ತನಕ ಎಂದೆನುತ ಅಲ್ಲಿಂದ ಹೊರಟೆ.

[ಈಗ ಒಂದು short break ತೊಗೊಳೊಣ. ಎಲ್ಲಾ ಹುಡುಗರಿಗೆ ಈ ನಿಮ್ಮ ದಿಗಂತನಿಂದ ಒಂದು message. If its sounds logical ಸ್ವೀಕರಿಸಿ ಇಲ್ಲ ಅಂದ್ರೆ ಬಿಟ್ಟುಬಿಡಿ.  ಲೈಫ್ನಲಿ ಕೆಲವು failures ಆದಾಗ like ಲವ್ failure etc, ಅದ್ಯಾಕೋ ತುಂಭಾ ಹುಡುಗ್ರು smoking, heavy drinking ಶುರು ಮಡ್ಕೊಂಡ್-ಬಿಡ್ತಾರೆ. ಯಾಕೆ ಅಂತ ಕೇಳಿದ್ರೆ ಕುಶಿ ಕೊಡುತ್ತೆ, ನೋವನ್ನ ಮರೆಸುತ್ತೆ ಅಂತೆಲ್ಲಾ ಅಂತಾರೆ. ಈ ಸಣ್ಣ ಕುಶಿ ಚಿಕ್ಕ ನೋವನ್ನ ಮಾರಿಯುವುದ್ದಕೋಸ್ಕರ ಮುಂದೆ ಆಗುವ ದೊಡ್ಡ ಪರಿಣಾಮಗಳನ್ನ ಮಾರಿಯುವುದು ಸರಿಯೆ ? ತಡಿಯಲಾರದ ನೋವನ್ನ ಈ ದುರಬ್ಯಾಸಗಳು ತನ್ದುಬಿಡುತ್ತದೆ. ಎಚ್ಚರಿಕೆ ಫ್ರೆಂಡ್ಸ್. Nothing is impossible ಅಂತಾರೆ. ಅದೆಲ್ಲ ದೊಡ್ಡ ಸುಳ್ಳು. ಆದರೆ smoking/heavy drinks quit ಮಾಡೋದು possible.]

ಎಲ್ಲಾ ಇತ್ತು ಆದ್ರೂ ಕುಶಿ ಇಲ್ಲ ಅಂತ ಆಗಾಗ ಅನ್ಸ್ತಿತ್ತು. ಆಗಂತ ಹೆಜ್ಜೆ ಗುರುತನ್ನ ನೋಡ್ತಾ ನಿಲ್ಲಕ್ಕಾಗುತ್ತಾ. ಹೇಗೋ life ನಡೀತಿತ್ತು. ಅದು ನನ್ನ ಬದುಕಿನ ಕುಶಿಯ ಹುಡುಕಾಟದ ಕ್ಷಣಗಳಾಗಿತ್ತು. ಮನೆಯಲ್ಲಿ ಮತ್ತೆ ಮದುವೆಯ ಮಾತುಕತೆಗಳು. ಒಮ್ಮೊಮ್ಮೆ ನಮ್ಮ ಕುಶಿಗಿಂತ ಬೇರೆಯವರ ಕುಶಿಗೋಸ್ಕರ ಬದುಕಬೇಕಾದಂತಹ ಸಂದರ್ಬಗಳು ಬಂದುಬಿಡುತ್ತೆ. ಅಂತದೊಂದು ಸಂದರ್ಬ ನನಗೂ ಎದುರಾಯಿತು. 

ಅದೇನು ಆನೋದ್ದು ಮುಂದೆ ಗೋತಾಗುತ್ತೆ.

ಕೆಲವು ತಿಂಗಳುಗಳ ನಂತರ....................................

ನಾನು ನನ್ನ ಉರಾದ ಶೃಂಗೇರಿಗೆ trainನಲ್ಲಿ ಪ್ರಯಾಣ ಮಾಡ್ತಿದ್ದೆ. ಕೈಯಲ್ಲಿ ಒಂದು novel ಇತ್ತು. ಈ ಮದ್ಯೆ novels ಓದೋ ಹವ್ಯಾಸನು ಶುರು ಮಾಡಿದ್ದೆ. ಕೆಲವೊಮ್ಮೆ ಎಲ್ಲರಿಗಿಂತ ಉತ್ತಮ ಸ್ನೇಹ ಪುಸ್ತಕಗಳು ಕೊಡುತ್ತವೆ. ಬಿರುಸಾದ ಗಾಳಿ, novel, ಜೊತೆಗೆ Tea. ಎಂತ combination ಅಲ್ವಾ ? Train speed ಕಡಿಮೆ ಆಯ್ತು ಯಾಕೆ ಅಂದ್ರೆ ಮುಂದಿತ್ತು ಒಂದು station.  


ನೀರು ತರೋದಕ್ಕೆ ಅಂತ ಕೆಲಗಿಳಿದು ಹೋದೆ. ಹೋಗಿ ಬರುವಸ್ಟರಲ್ಲಿ ನನಗೆ ಕಂಡಿದ್ದು ಬೇರಾರು ಅಲ್ಲ ಸಾಹಿತ್ಯ. ಅವಳು ನನ್ನ compartment , ನನ್ನ seatna ಎದುರೆಡೆ ಕೂತಿದ್ಲು. ಅವಳನ್ನ ನೋಡಿದ ತಕ್ಷಣ ಒಂತರಾ ಮುಜುಗರದ ಭಾವನೆ ಉಂಟಾಯಿತು. ನನ್ ಸೀಟ್ ಹತ್ರ ಹೋದ್ರೆ ಅವಳಿಗೂ uncomfortable ಆಗಬಹುದು ಅಂತ door ಹತ್ರಾನೇ ನಿಂತಿದ್ದೆ. ಆದ್ರೆ yestottu ಅಂತ ನಿಲ್ಲೋದು.  

ದೈರ್ಯ ಮಾಡಿ ಹೋದೆ. ನಾನು ಹೋದ ತಕ್ಷಣ ಅವಳು ನನ್ನನ್ನು ನೋಡಿ ತಲೆ ಬಗ್ಗಿಸಿಬಿಟ್ಟಳು. ಅವಳು ಮತ್ತೆ ತಲೆ ಎತ್ತಲೆ ಇಲ್ಲ . I could see from her face that she was not feeling comfortable. ಅವಳು ಹಾರಮಾಗಿ ಪ್ರಯಾಣ ಮಾಡಬೇಕಾದರೆ ನಾನು ಅಲ್ಲಿಂದ ಎದ್ದು ಹೋಗುವುದು ಒಂದೇ ದಾರಿ ಅಲ್ಲ. ನಾನು ಅವಳ ಹೆಸರನ್ನು ಕರೆದೆ, ಆದರೆ ಅವಳು ಕೇಳಿಸದ ಹಾಗೆ ನಟನೆ ಮಾಡಿದಳು. ಮತ್ತೊಮ್ಮೆ ಜೋರಾಗಿ ಕರೆದು ನನ್ನ bagನಲ್ಲಿದ್ದ ಕಾರ್ಡನ್ನು [card] ಅವಳಿಗೆ ಕೊಟ್ಟೆ. ಅವಳು ಸ್ವೀಕರಿಸಲು ಇಂಜರಿಗಿದಳು. ಆಗ ನಾನು ಅವಳಿಗೆ ಹೇಳಿದೆ ಅದು ನನ್ನ Engagement invitation ಎಂದು.



ನಾ ಹಾಗೆಂದು ಹೇಳಿದ ತಕ್ಷಣ ಅವಳ ತುಟಿಯಂಚಿನಲಿ ನಗು ಮೂಡಿತು. ಅವಳಿಗೆ ಅನ್ನಿಸಿರಬೇಕು "Oh he is engaged eh, then he won’t trouble me” ಅಂತ. ಅವಳು ಮುಗುಳ್ನಗುತ್ತಾ congrats ಎಂದಳು. ನಾನು return smile ಒಂದನ್ನು ಕೊಟ್ಟು thanks ಅಂದೆ. ಇಸ್ಟೊತ್ತು ಸುಮ್ಮನಿದ್ದ ಅವಳು ನಾನು Engaged ಅಂದ ತಕ್ಷಣ ಮಾತಿನ ಸುರಿಮಳೆಗಳನ್ನು ಶುರು ಮಾಡಿದಳು. 



ಸಾಹಿತ್ಯ: ಹುಡುಗಿ ಏನ್ ಮಾಡ್ತಿದಾಳೆ ?
ನಾನು: MBA ಮಾಡ್ಕೊಂಡಿದಾಳೆ. ಕೆಲಸ ಮಡ್ತಿಲ್ಲ.
ಸಾಹಿತ್ಯ: ಹೌದ. nice.
ನಾನು: ಮತ್ತೆ .... ಅಲ್ಲೇ work ಮಡ್ತಿದೀರ ಇನ್ನೂ ?
ಸಾಹಿತ್ಯ: ಹೌದು. ನೀವು ಈಗ ಎಲ್ಲಿ ಕೆಲಸ ಮಡೊದು ?
ನಾನು: ನಂದೇ ಒಂದು company open ಮಡಿದೀನಿ.
ಸಾಹಿತ್ಯ: OMG. Really ? ಯಾವ ಕಂಪನೀ ? ಏನ್ ಹೆಸರು ?
ನಾನು: ಇಲ್ಲ :D ಸುಮ್ಮನೆ ಹೇಳ್ದೆ ಅಸ್ಟೇ. ನಾನು UVW companynalli ಕೆಲಸ ಮಡ್ತಿದೀನಿ.

ಅವಳು Killer look ಕೊಟ್ಳು. ನಾನು ನಗ್ತಾಇದ್ದೆ.

ನಾನು: ಎಲ್ಲಾ ಸರಿ, ನಾನು ಅಲ್ಲಿ work ಮಡ್ತಿಲ್ಲ ಅನ್ನೋದು ನಿಮಗೆ ಹೇಗೆ ಗೋತಾಯ್ತು ? :)
ಸಾಹಿತ್ಯ: ಅಯ್ಯೋ .. ಸಿಕಾಕೊಂಡೇ.
ನಾನು: ಹೇಳಿ .. ಹೇಗೆ ?
ಸಾಹಿತ್ಯ: ಹಂಗೆ.. ಹುಡ್ಗೀರ್ಗೆ ಕೆಲವು ಮೂಲಗಳಿಂದ info ಸಿಗುತ್ತೆ.
ನಾನು: ಅಂದ್ರೆ ,, ನಾನು ನಿಮಗೆ propose ಮಡಿದ್ದನ್ನ ಒಂದ್ ಹತ್ತು ಜನಕ್ಕೆ ಹೆಳಿದೀರ ಅಂತ ಆಯ್ತು.
ಸಾಹಿತ್ಯ: ಹತ್ತು ಇಲ್ಲ. ಒಂದ್ ಇಬ್ಬರಿಗೆ ಹೆಳಿದೀನಿ ಅಸ್ಟೇ.. Very trusted friends. ಅವರು ಯಾರಿಗೂ ಹೆಳಲ್ಲ :)
ನಾನು: ನಂಬೋ ವಿಷ್ಯ.. 

ಸಾಹಿತ್ಯ: ಹೌದು.. ಎಲ್ಲಾ moviesನಲ್ಲೂ ಹುಡುಗರು ಹುಡುಗಿ ಓಪ್ಲಿಲ್ಲ ಅಂದ್ರೆ ಯಾಕೆ ಅಂತ reason ಕೇಳ್ತಾರೆ, ಆದರೆ ನಾನು ಇಲ್ಲ ಅಂದಾಗ ನೀವು ಯಾಕೆ ಅಂತ ಕೆಳಲೆ ಇಲ್ಲ.
ನಾನು: Reason ಗೊತ್ತಿರುವಾಗ ಕೇಳಿ ಏನ್ ಪ್ರಯೋಜನ..
ಸಾಹಿತ್ಯ: eh ? ರೀಸನ್ ಗೋತಾ ?
ನಾನು: 1. ಮನೆನಲ್ಲಿ ಒಪ್ಪಲ್ಲ 2. ನೀವು already commit 3. ಹುಡುಗ ಈಸ್ಟ ಇಲ್ಲ. Reason ಈ ಮುರರಲ್ಲಿ ಯಾವುದಾದರೂ ಒಂದು ಇರುತ್ತೆ. third one ಆಗಕ್ಕೆ chance ಇಲ್ಲ ಬಿಡಿ :)
ಸಾಹಿತ್ಯ: ಅಬ್ಬಬ್ಬಾ .. ಏನ್ Analysis.
ನಾನು: :) Personal ವಿಷ್ಯಾನ ಕೇಳೋದು ಸರಿ ಅಲ್ಲ ಅನ್ಸ್ತು,, ಅದಕ್ಕೆ ಕೆಳಿಲ್ಲ.
ಸಾಹಿತ್ಯ: ಆದರೆ ಈ reasons ಯಾವುದು ಅಲ್ಲ........ 

ನಾನು: Oh..
ಅವಳು ಕಿಟಕಿಯ ಕಡೆ ಮುಖ ಮಾಡಿ ಕುಳಿತಳು.
.
.
.
ಕೆಲವು ನಿಮಿಶಗಳ ನಂತರ
ನಾನು: ಸಾಹಿತ್ಯ, ಕೇಳಬಾರದು ಅನ್ಕೊಂಡಿದ್ದೆ.. ಆದರೂ ಕೇಳ್ತಿದೀನಿ. ನಾನು ಯಾಕೆ ಅಂತ ಕಾರಣ ತಿಳ್ಕೊಬಹುದಾ ?
ಸಾಹಿತ್ಯ: ಕೆಲವು ವಿಷಯಗಳನ್ನ ಯಾರಿಗೂ ಹೆಳ್ಕೊಳೊಕೆ ಆಗಲ್ಲ. ಹೇಳ್ಕೋಬೇಕು ಅನ್ಸುತ್ತೆ , ಆದರೆ ಹೇಳಿದ ಮೇಲೆ ದುಃಖ ಆಗುತ್ತೆ. ಹೇಳಿದರು ಪ್ರಯೊಜನ ಇರೋದಿಲ್ಲ, ಯಾಕೆ ಅಂದ್ರೆ ಉತ್ತರ ಇಲ್ಲದ ಪ್ರಶ್ನೆಗಳು ಹಲವಾರು.
ನಾನು: ಅವಳು ಹಾಗೆನುತ ಕಿಟಕಿಯ ಕಡೆ ಮುಖ ಮಾಡಿ ಕುಳಿತಳು. ಅವಳ ಕಣ್ಣಂಚಿನಲಿ ಕಾಣುತಿತ್ತು ಚಿಕ್ಕದೊಂದು ಹನಿಯು.  

ನಾನು: ಸಾಹಿತ್ಯ, ನೀವು ಯಾರನ್ನೂ ಪ್ರೀತಿಸಬಾರದು ಅಂತ decide ಮಡಿದೀರ ? ಅಥವ ಮದುವೆ ಆಗಬಾರದು ಅಂತ decide ಮಾಡಿದೀರ ?
ಸಾಹಿತ್ಯ: ಗೊತಿಲ್ಲ. ...

ನಾನು: ಯಾರಾದ್ರೂ ಬಂದು ನಿಮ್ಮತ್ರ "ನಿಮ್ problem ಏನೇ ಇರಲಿ, ನನಗೆ ಪರವಾಗಿಲ್ಲ.. ನೀವು ನಿಮ್ problem ನನ್ನ ಹತ್ತಿರ ಹೇಳ್ಕೊಂಡ್ರೆ solve ಮಡೊಕೆ try ಮಡ್ತೀನಿ.. ಆ problem solve ಮಾಡೋಕೆ ಆಗೋದೇ ಇಲ್ಲ ಅಂದ್ರೆ ಅಥವ ಅದರಿಂದ ಬದುಕುವುದಕ್ಕೆ ಆಗೋದೇ ಇಲ್ಲ ಅಂದ್ರೆ ಮಾತ್ರ ಇಲ್ಲ ಅನ್ನೀ" ಅಂದ್ರೆ ಏನ್ ಹೇಳ್ತೀರಾ or else if you get a guy who madly loves you what are you going to tell ? 

ಸಾಹಿತ್ಯ: ತುಂಭಾ ಕಷ್ಟಡ ಪ್ರಶ್ನೆಗಳನ್ನ ಕೆಳ್ತಾಇದೀರ. ಇದಕ್ಕೆ ಒಂದು ಪದದಲ್ಲಿ ಉತ್ತರಿಸಲು ಸಾದ್ಯ ಇಲ್ಲ.
ನಾನು: ನಾನು ಒಂದು ಪದದಲ್ಲಿ ಉತ್ತರಿಸಿ ಅಂತ ಹೇಳಿಲ್ಲ ಸಾಹಿತ್ಯ.
ಸಾಹಿತ್ಯ: hmm.. ಹಿಂದಿನದ್ದೆಲ್ಲಾ ಮರೆತು ಹೊಸ ಪ್ರಯಾಣಕ್ಕೆ ಅವಕಾಶ ಸಿಕ್ಕಿದರೆ ಕಂಡಿತ ಒಪ್ಕೊತೀನಿ.
ನಾನು: ಅಂದ್ರೆ you will accept that person ?
ಸಾಹಿತ್ಯ: Yes.
ನಾನು: ಹಾಗಾದರೆ ನಿಮಗೆ ನಾನು ಮತ್ತೊಮ್ಮೆ propose ಮಾಡ್ತಾಇದೀನಿ ಈಗ. ನಿಮ್ problem ಏನೇ ಇರಲಿ , ನಿಮ್ಮ past ಏನೇ ಇರಲಿ ನನಗೆ ಅದು ಬೇಡ. ನನ್ನ proposal ಒಪ್ಕೋತೀರಾ ?
ಸಾಹಿತ್ಯ: WHAT ? ತಮಾಷೆ ಮಾಡ್ಬೆಡಿ ! ಎಲ್ಲದಕ್ಕೂ ಒಂದು limit ಇದೆ. You are Engaged. Mind it. ಇದು movie ಅಲ್ಲ, ಹೇಗೆ ಬೇಕೋ ಹಾಗೆ edit ಮಾಡೋಕೆ.

ನಾನು: I am not Engaged. ಅದು ನನ್ನ Engagement card ಅಲ್ಲ. ನನ್ನ school friendದು. ಅವನ ಹೆಸರು ಕೂಡ ದಿಗಂತ್. ಆದರೆ ಆ invitation deepಆಗಿ observe ಮಾಡಿದ್ರೆ ನಿಮಗೆ ಗೋತಾಗ್ತಿತ್ತು. but ನೀವು ಓಪನ್ ಮಾಡಿ ನೊಡ್ಲಿಲ್ಲ. ನನ್ನ ನೀವು ನೋಡಿದಾಗ ತುಂಭಾ uncomfortable ಆಗಿ ಕಾಣಿಸ್ತಿದ್ದ್ರಿ. ನಾನು ನನ್ನ ಉರಿಗೆ ಹೋಗ್ತಿದ್ದಿದ್ದು ಈ engagement attend ಮಾಡೊದಕ್ಕೆ ಮತ್ತು ನನ್ನ ತಂದೆ ತಾಯಿಗೆ ಇಸ್ಟವಾದಂತ ಒಂದು marriage proposal ನೂಡೊದಕ್ಕೆ.

ನಾ ಈಗೆಂದ ತಕ್ಷಣ ಅವಳಿಂದ ಏನು response ಬಂದಿಲ್ಲ.

ನಾನು: ಸಾಹಿತ್ಯ, ನೀವು ಈಗಲೇ ಅಭಿಪ್ರಾಯ ತಿಳಿಸಿ ಅಂತ ನಾನು ಬಲವಂತ ಮಾಡೋದಿಲ್ಲ. ಯೋಚನೆ ಮಾಡಿ. ನಾನು ನಿಮಗೆ max 15 days time ಕೊಡ್ತೀನಿ. ಇದು ನನ್ನ Visiting card.. phone number, ಮನೆ ವಿಳಾಸ ಎಲ್ಲ ಇದೆ. ನಿಮ್ಮ ಅಭಿಪ್ರಾಯ ಹದಿನೈದು ದಿನಗಳ ಒಳಗೆ ತಿಳಿಸಿ. YES ಅಥವಾ NO ಏನೇ ಆಗಿದ್ರು ತಿಳಿಸೋದು ಮರೆಯಬೇಡಿ.
ಕಾಯ್ತಾ ಇರ್ತೀನಿ. ಮರಿಬೆಡಿ.

ಮತ್ತದೇ ಮೌನ ಆವರಿಸಿತು. ಅವಳು ಕಿಟಕಿಯ ಕಡೆ ಮುಖ ಮಾಡಿ ಕುಳಿತಳು. ನನಗೆ ಅಲ್ಲಿ ನಿರಾಳವಾಗಿ ಕುಳಿತುಕೊಳ್ಳಲು ಸಾದ್ಯವಾಗಲಿಲ್ಲ. ಅಲ್ಲಿಂದ ಎದ್ದು ಬೇರೆ compartmentಗೆ ಹೊದೆ. ಹೋಗುವ ಮುನ್ನ ಅವಳಿಗೆ Bye ಎಂದೇ. ಅವಳು ಎಲ್ಲಿ ಯಾಕೆ ಅಂತ ಕೆಳಲಿಲ್ಲ. Just Bye ಅಂದ್ಲು.

ಆಕರ್ಷಣೆ ಪ್ರೀತಿ ಆಗಬಹುದಲ್ಲವ ? ಅದಕ್ಕೆ ನನ್ನ ಕಥೆಯೇ ಸಾಕ್ಷಿ..

"ಅವಳ ಉತ್ತರಕ್ಕಾಗಿ ಕಾಯುತ ಕುಳಿತಿರುವೆ , ಉತ್ತರ ಏನೇ ಇರಲಿ ಜೀವನ ನಿಲ್ಲುವುದಿಲ್ಲ, ಆದರೂ ಆಶಿಸುತಿರುವೆ ಅವಳು ಒಪ್ಪಿಕೊಳ್ಳಲೆಂದು.

ಹೃದಯದ ಮಿಡಿತ ಕೆಳಲು ಎಸ್ಟು ಸುಂದರ..
ಆದರೆ ಅದೇ ಮಿಡಿತ ಉತ್ತರಕ್ಕಾಗಿ ಕಾಯುವಾಗ ಭಯಾನಕ..
ಈ ಮಿಡಿತಗಳನ್ನು ಹಿಡಿತದಲ್ಲಿ ಇರಿಸುವ ಪ್ರಯತ್ನದಲಿ ನಾ ಸಾಗುತಿರುವೆನು."


To all readers of this story. Thanks a lot for following. Whether Sahitya agreed to his proposal or not is upto your imagination. I decided not to conclude it because when I asked my friends who were following this story about "what kind of climax you guys like ?" Few said happy ending and few said sad ending. As this is my first story I do not wanted to disappoint the readers. I have left it to their choice/wish.

When I decided to write a story I really did not have any flow. Everyday I was thinking how to proceed. But whatever I think that would have shown in one or the other movie or in some novels. Story writing is really a tough job. We keep commenting on movies saying no story/ nothing new, etc. Give a try to write a story. You will experience the same as what I said. Hats off  to the authors who think out of the box and write amazing stories.

The journey in writing this story was amazing. Thanks to all who gave feedbacks.