Wednesday, December 25, 2013

ಅದಲು ಬದಲು

ಕನಸು ನನಸಾಗಲಿ ಎನ್ನುವರೊಳು
ನನಸು ಕನಸಾಗಲಿ ಎನ್ನುವರೆಸ್ಟೋ
ಕಹಿ ಸಿಹಿಯಾಗಲಿ ಎನ್ನುವರೊಳು
ಸಿಹಿ ಕಹಿಯಾಗಲಿ ಎನ್ನುವರೆಸ್ಟೋ
ಜೀವನದ ಅದಲು ಬದಲುಗಳೊಳು
ನಿನಗಾಹುದು ಹಿತ
ಅದಲೊ ಬದಲೋ...


……Shilpa

Sunday, December 8, 2013

ಹಾಗೆ ಒಮ್ಮೊಮ್ಮೆ


ಸುಮ್ಮನೆ ಕುಳಿತಿರಲು ಬೆಚ್ಚನೆಯ ಹೊದಿಕೆಯೊಳಗೆ
ಕಿವಿಗಳು ಇಂಪಾಗಿರಲು ಗಾನ ಲಹರಿಯೊಳಗೆ
ನಲಿಯುತಿಹುದು ಮುಂಗುರುಳು ತಂಪಾದ ಗಾಳಿಯೊಳಗೆ
ಇದೆಲ್ಲಾ ಇದ್ದ ಮೇಲೆ ಸುಮ್ಮನಿರುವುದೆ ಮನಸು ?

ತೇಲುತಿರುವುದು ಮನಸ್ಸು ಕನಸುಗಳೊಳಗೆ .... :)

……Shilpa