Tuesday, April 17, 2018

#Asifa ಗ್ಯಾಂಗ್ ರೇಪ್ ಪ್ರಕರಣದ

ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ವಿಚಾರ ಕೇಳಿದಾಗ ಆರೋಪಿಗಳ ಮೇಲಿನ ಆಕ್ರೋಶ ಮತ್ತು ಮಹಿಳೆಯರಿಗೆ ಸಮಾಜದಲ್ಲಿ ಇರುವ ಭದ್ರತೆ ನನ್ನನು ತೀವ್ರವಾಗಿ ಕಾಡುತಿತ್ತು. ಈಗ ಒಂದು ಹೆಣ್ಣು ಮಗುವಿನ ತಾಯಿಯಾಗಿ ಕೆಲವೊಮ್ಮೆ ಸಮಾಜದಲ್ಲಿ ನಡೆಯುವ ವಿಚಾರಗಳನ್ನು ಕೇಳಿದಾಗ ಆಕ್ರೋಶ , ಭದ್ರತೆ ಜೊತೆ ಜೊತೆಗೆ ಒಬ್ಬ ತಾಯಿಗೆ ಕಾಡುವ ಪ್ರಶ್ನೆ ಅವಳ ಕಂದಮ್ಮನನ್ನು ಸ್ವತಂತ್ರವಾಗಿ ಬೆಳಸುವಲ್ಲಿ ವಿಫಲರಾಗುತ್ತೆವೇನೋ ಎಂಬ ಭೀತಿ. ಅವಳ ಕಂದಮ್ಮನ ಕನಸು ಗುರಿಗಳು ನನಸಾಗುವುದಿಲ್ಲವೆನೊ ಎಂಬ ಸಂಶಯ.

ತಿಳಿಯದೆಯೋ ತಿಳಿದೋ ಇಂತಹ ವಿಷಯಗಳು ತಾಯಿ ತನ್ನ ಮಗುವನ್ನು ಬೆಳೆಸುವ ರೀತಿಯ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಸಮಾಜದಲ್ಲಿ ತನ್ನ ಮಗಳಿಗೆ ಎದುರಾಗಬಹುದಾದ ಸಂಕಸ್ಟಗಳನ್ನು ನೆನೆದು ಅವಳನ್ನು ಕೂಪಮಂಡೂಕದಲ್ಲೇ ಇಟ್ಟು ಬೆಳೆಸುವಂತಹ ಆಲೋಚನೆಗಳು ಮೂಡುತ್ತವೆ. ಕಪ್ಪೆಚಿಪ್ಪಿನಲ್ಲಿರುವ ಮುತ್ತಿನ ಹಾಗೆ ಅವಳನ್ನು ಜೋಪಾನವಾಗಿ ಇಡಲು ಬಯಸುತ್ತಾಳೆ. ಹಾರಾಡುವ ಗಿಣಿಯನ್ನು ಕಟ್ಟಿಹಾಕಲು ಯತ್ನಿಸುತ್ತಾಳೆ. ನಾಲ್ಕು ಗೋಡೆಗಳ ಮಧ್ಯೆ ಸುರಕ್ಷಿತವಾಗಿ ಇಡಲು ಬಯಸುತ್ತಾಳೆ. ಹಕ್ಕಿಯಂತೆ ಹಾರಡಬೇಕಿರುವ ಮಗಳ ರೆಕ್ಕೆ ಮುರಿದು ತನ್ನ ಕಣ್ಮುಂದೆಯೇ ನಲಿದಾಡಲಿ ಎಂದು ಬಯಸುತ್ತಾಳೆ. ಇಂತಹ ಚೌಕಟ್ಟಲ್ಲಿ ಬೆಳೆಯುವ ಮಗಳಿಗೆ ತಾಯಿಯ ಪ್ರೀತಿ ತಳಮಳ ಅರಿವಾಗದೆ ತಾಯಿಯನ್ನು ದ್ವೇಷಿಸಲಾರಂಭಿಸುತ್ತಾಳೆ. ಮಗಳಿಗೆ ಕೊನೆಗೆ ಕಾಡುವ ಪ್ರಶ್ನೆ ಇಂತಹ ಸಮಾಜದಲ್ಲಿ ನಾನೇಕೆ ಜನಿಸಿದೆ, ನನ್ನ ಬದುಕಿಗೆ ಅರ್ಥವೇನು ಎಂದು? 

ಇದಕ್ಕೆಲ್ಲ ಮೂಲ ಕಾರಣ ಹೆಣ್ಣಾಗಿ ಜನಿಸಿದ್ದೆ, ತಾಯಿಗೆ ಮಗಳ ಮೇಲಿನ ಪ್ರೀತಿಯೇ , ಕಾಮುಕ ವ್ಯಾಗ್ರಿಗಳೇ, ಶಿಕ್ಷಿಸದ ನ್ಯಾಯಮೂರ್ತಿಗಳೇ, ಕಾಪಾಡುವ ವಕೀಲರೇ, ಇಡಿಯದ ಪೊಲೀಸರೇ, ಅರ್ಥ ಪಡಿಸದ ಗುರುಗಳೇ, ಸರಿಯಾಗಿ ಬೆಳೆಸದ ತಂದೆ ತಾಯಿಯರೇ, ಬಡತನವೇ, ದೇಶವೇ , ರಾಜಕಾರಣಿಗಳೇ, ಜವಬ್ದಾರಿ ಇಲ್ಲದ ಪ್ರಜೆಗಳೇ, ಕೋಮುವಾದಿಗಳೇ, ಹುಚ್ಚು ಆಲೋಚನೆಗಳೇ, ಮೂಢ ನಂಬಿಕೆಯೇ ,ಅತಿ ಆಸೆಯೇ , ದುರಹಂಕಾರಿಗಳೇ , ಹಣದ ಮದವೇ?
ಈ ಪ್ರಶ್ನೆಗೆ ನಮ್ಮ ಸಮಾಜದಲ್ಲಿ ಉತ್ತರವಿಲ್ಲ ಮಗಳೆ. ನಿನ್ನ ಆತ್ಮಕೆ ಸಿಗಲಿ ಶಾಂತಿ.

No comments:

Post a Comment